ಕೆ . ಎಲ್. ಕುಂಡಂತ್ತಾಯರಲ್ಲಿ ಒಬ್ಬ ಆಳದಾಳದ ವಿಶ್ಲೇಷಕರನ್ನು ಕಂಡಂತಾಯಿತು !





ಕೆ . ಎಲ್.  ಕುಂಡಂತ್ತಾಯರಲ್ಲಿ ಒಬ್ಬ ಆಳದಾಳದ ವಿಶ್ಲೇಷಕರನ್ನು ಕಂಡಂತಾಯಿತು !
----------------------------------------------------------------------------------------------
ಬಹುಶ:ಈ ಬೆಂಗಳೂರಿನ ಜ೦ಜಡಗಳ ನಡುವೆ ನಾನು ಓದು ಮರೆತು ಅದೆಷ್ಟೋ ವರ್ಷಗಳಾಗಿದ್ದವು ಅಂದರೂ ತಪ್ಪೇನಿಲ್ಲ !
''ಮಣ್ಣಬಾಜನ'' ಕವನ ಸಂಕಲನ ಬರೆಯುವಾಗ ನನ್ನಲ್ಲಿ ಓದುವಿಕೆಗಿಂತಲೂ ಇದ್ದಿದ್ದು  ತುಳು ಜೀವನದ  ಬಾಲ್ಯ ಸಾಂಗತ್ಯ !  ನನ್ನ ಮನೆಯಂಗಳದಲ್ಲಿ  ಕೃಷಿ ಒತ್ತಟ್ಟಿನವರ ನಡುವೆ   ಆಡಿ  ನಲಿದ ಭಾಷೆಯನ್ನೇ   ಹಾಡುಗಳಾಗಿ ಇಲ್ಲಿ ನೇಯ್ದಿರುವುದು !  ಪುಸ್ತಕ ಮುಂಬೈ , ಬೆಂಗಳೂರು  ಮತ್ತು ಕೊನೆಗೆ ಮಂಗಳೂರಲ್ಲಿ ಹೀಗೆ  ಮೂರು ಪ್ರಮುಖ ನಗರಗಳಲ್ಲಿ  ಬಿಡುಗಡೆಯಾಗಿ  ತುಳು ಭಾ ಷೆಯ ಮಟ್ಟಿಗೊಂದು ಅನನ್ಯ ತಂಪಿನ ಅನುಭವ  ತಂದು ಕೊಟ್ಟಿರುವುದು ನಿಜಕ್ಕೂ  ಸಂತೋಷ !

 ಮಂಗಳೂರು ಆಕಾಶವಾಣಿಯ  ''ಸ್ವರಮಂಟಮೆ''  ಪುಸ್ತಕ ಬುಡುಗಡೆಯ ವಿಶಿಷ್ಟ ಕಾರ್ಯಕ್ರಮದಲ್ಲಿ  ಈ ಪುಸ್ತಕದ  ಅನಾವರಣದ  ಹೊಣೆ ಹೊತ್ತವರು  ಖ್ಯಾತ ಪತ್ರಕರ್ತ , ಜಾನಪದ   ವಿದ್ವಾಂಸ  ಕೆ.  ಎಲ್.  ಕುಂಡಂತ್ತಾಯ.
ಬರೇ ಕೇಳಿ ತಿಳಿದ ಹೆಸರು , ಮುಖ ಪರಿಚಯವಿಲ್ಲದಿದ್ದರೂ  ಅವರ ಗಡಸು ಧ್ವನಿಯಿಂದ  ಮತ್ತು  ಅಪಾರ ಸುಜ್ಞಾನದಿಂದ   ಮನಸ್ಸಿಗೆ   ತೀರಾ ಹತ್ತಿರವಾದವರು.  ಹಾಗಾಗಿ   ನೋಡಿ ಮಾತಾಡಿಸಬೇಕು  ಅನ್ನೋ ಕುತೂಹಲ  ಸಹಜವಾಗಿಯೇ ಇತ್ತು !

ಕಾರ್ಯಕ್ರಮದ  ಹಿಂದಿನ ದಿನ  ಮಹೇಂದ್ರನಾಥರಲ್ಲಿ  ''ಪುಸ್ತಕದ ಬಗ್ಗೆ  ಬರಿಯ ಹೊಗಳಿಕೆ ಬೇಡ, ವಸ್ತುನಿಷ್ಠ  ವಿಶ್ಲೇಷಣೆ ಇರಲಿ ! ತಪ್ಪುಗಳನ್ನು ತೀರಾ ಒತ್ತಡವಿಲ್ಲದೆ ಒಪ್ಪಿಕೊಳ್ಳುವಷ್ಟು ವೈಶಾಲ್ಯತೆ  ನನ್ನಲ್ಲಿ ಇದೆ''  ಎಂದು ಸೂಕ್ಷ್ಮವಾಗಿ ತಿಳಿಸಿದ್ದೆ !

ಕುಂಡಂತ್ತಾಯರು  ಮಾತಿಗಿಳಿದಾಗ  ನನಗೆ ಅರಿವಾದದ್ದು  ಬಹುಶ: ಪುಸ್ತಕದ ವಿಷಯ  ಎಲ್ಲಿ ಮುಟ್ಟ ಬೇಕೋ ಅಲ್ಲಿಗೆ  ತಲುಪಿದೆ ಅನ್ನೋದು ! ಭಾಷೆ  ಸರಳವಾಗಿರಬೇಕು, ಸಹ್ಯವಾಗಿರಬೇಕು, ಸಿಹಿಯಾಗಿರಬೇಕು  ಹೃದ್ಯವಾಗಿರಬೇಕು ಎಂದು ನಾನು  ಕೆ  ಎಸ್  ನರಸಿಂಹ ಸ್ವಾಮಿಯವರ ಕವನಗಳಿಂದ ಅರಿತುಕೊಂಡ   ಆತ್ಮೀಯ ಸತ್ಯ !

 ಕುಂಡಂತ್ತಾಯರು  ಮೊದಲ ಮಾತಲ್ಲೇ
 ''ಇದು ಎಲ್ಲೋ ಬಾಲ್ಯದ  ಸವಿ ನೆನಪಿನ ತುಣುಕುಗಳ ನೇಯ್ಗೆ , ಬರೀ ಓದಿನಿಂದ ಉದಿಸಿದ್ದಲ್ಲ  ಅಂದರು !'' . ಆಹಾ ಎಂತಹ  ನಿಖರ ಊಹೆ !!  ವಿಶ್ಲೇಷಕನಿಗೆ ಅಗತ್ಯವಾಗಿ  ಇರಬೇಕಾದ ಬೇಕಾದ  ಸರ್ವಶ್ರೇಷ್ಠ  ಸೂಕ್ಷಾತಿ ಸೂಕ್ಷ್ಮ  ಗ್ರಹಿಕೆ !!.

 ''ಮಲ್ಲಾದಿಗೆ'' ಮತ್ತು ''ಸತ್ಯ'' ದಂತಹ  ಕವನಗಳನ್ನು ಉದಾಹರಿಸುತ್ತಾ ಇಲ್ಲಿ  ಇಂದಿನ  ಜನ ಜೀವನದ ಮನಸ್ಥಿತಿಗೆ  ಸವಾಲಿದೆ , ಈಗಿನ ಆರೋಗ್ಯದ  ಸ್ಥಿತಿಗೆ  ಸವಾಲಿದೆ  ಅಂದರು !  ಅಂಟು  ಅಂಟಾಗಿದ್ದ   ''ಸತ್ಯ'' ಅನ್ನೋ ಹಾಡಿನ  ಪೂರ್ತಿ  ಗೂಢಾರ್ಥವನ್ನು ಹಲಸಿನ  ತೊಳೆಯಷ್ಟೇ  ಸಲೀಸಾಗಿ   ಬಿಡಿಬಿಡಿಯಾಗಿ  ಬಿಡಿಸಿಟ್ಟರು !

ಇನ್ನಷ್ಟು, ಮತ್ತಷ್ಟು  ಕೇಳಬೇಕು  ಅನ್ನಿಸುತಿತ್ತು ಅವರ ಮಾತುಗಳು! ಆದರೆ ಆಕಾಶವಾಣಿಯ  ಸಮಯ  ನಮ್ಮನ್ನು ಹದ್ದು ಬಸ್ತಿನಲ್ಲಿಟ್ಟು  ಅಲ್ಪತೃಪ್ತರಾಗುವಂತೆ ಮಾಡಿತು !

 ಕುಂಡಂತಾಯರ  ಪಕ್ಕದಲ್ಲೇ  ಕುಳಿತು  ಅವರ ಸೂಕ್ಷ್ಮ ಗ್ರಹಿಕೆಯ  ಆಳದಾಳವನ್ನು ಕಂಡಂತಾಯಿತು !!

 ಕಾರ್ಯಕ್ರಮದ  ರೂವಾರಿಗಳಾದ  ಡಾ. ಸದಾನಂದ ಪೆರ್ಲ , ನಿಲಯ ನಿರ್ದೇಶಕಿ ಉಷಾಲತಾ  ಸರಪಾಡಿ , ಮಹೇಂದ್ರನಾಥ  ಸಾಲೆತ್ತೂರು  ಮತ್ತು  ಮೆಚ್ಚಿನ  ಸ್ನೇಹಿತೆ  ಅಕ್ಷತಾ ಪೆರ್ಲ  ಇವರೆಲ್ಲರೂ   ಈ  ಸಂದರ್ಭದಲ್ಲಿ ಸ್ಮರಣೀಯರೆ!
ಸಾಧ್ಯವಾದ್ರೆ ಆ ತೂಕಬದ್ಧ ವಿಶ್ಲೇಷಾತ್ಮಕ ಮಾತುಗಳನ್ನು ಒಮ್ಮೆ ಕೇಳಿ.







Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.