Posts

Showing posts from November, 2020
ಯಾರುಗೆ,  ಯಾರುಂಟು ಎರುವಿನ  ಸಂಸಾರ! ಪದಾರ್ಥ ಯಾರು = ಸಾಕು ಯಾರು೦ಟು = ಸಾಕು / ಇದೆ ಎರುವಿನ = ಕೋಣನ ಅಪಾರ್ಥ  :    ಕೋಣ ಒಂದು ಹೊಲದಲ್ಲಿ ಮೇಯುತ್ತಿದ್ದಾಗ  ಹೊಲದ ಒಡೆಯ ಅದನ್ನು ಹಿಡಿದು  ಸರಿಯಾಗಿ ತದಕುತ್ತಾನೆ. ಆಗ ಎತ್ತಿನ ಸಂಸಾರದ ಎಮ್ಮೆಯಾಗಲಿ , ಮರಿ ಕೋಣವಾಗಲಿ ಅದರ ರಕ್ಷಣೆಗೆ ಬರುವುದಿಲ್ಲ ಇದರಿಂದ ಬೇಸತ್ತ ಕೋಣ ಸಾಕಪ್ಪ ಸಾಕು  ಈ ಎರುವಿನ  ಸಂಸಾರ  ಎಂದು ಗೋಗೆರೆಯುವುದನ್ನು ಪುರಂದರ ದಾಸರು ದಾರಿಯಲ್ಲಿ ಅಡ್ಡಾಡುವಾಗ   ನೋಡಿ ಈ ರೀತಿ ಹಾಡಿದರು.  ನಂಗೆ ಅರ್ಥ ಆಗಿದ್ದನ್ನು ನಿಮಗೆ ವಿವರಿಸಿದ್ದೇನೆ  ! ಇನ್ನು ನೀವುಂಟು ,ನಿಮ್ಮ ಪುರಂದರ ದಾಸರುಂಟು !!