Posts

Showing posts from September, 2021

ರಸವೆಂಬ ವಿಷಕೆ ಬಲಿಯಾದೆ ಏತಕೆ ? ಸುಖ ಶಾಂತಿ ನಾಶಕೆ ಮರುಳಾ.....

Image
  ವಿರಸವೆಂಬ ವಿಷಕೆ  ಬಲಿಯಾದೆ ಏತಕೆ ?  ಸುಖ ಶಾಂತಿ  ನಾಶಕೆ ಮರುಳಾ.....   -------------------------------------------------------------------------------------- ''ನಿನ್ನ ಮನೆಗೆ  ಸಿವಿಲ್ ವ್ಯಾಜ್ಯ  ಬೀಳಲಿ!'' ಇದು ಹಿಂದಿನವರು  ತುಂಬಾ ಮನ ನೊಂದಾಗ  ಹಾಕುತ್ತಿದ್ದ ಹಿಡಿಶಾಪವಂತೆ. ಇದರಲ್ಲೇನು ಅಂತಹ  ತಾಪತ್ರಯ ? ಎಂದು ಮೇಲ್ನೋಟಕ್ಕೆ ಅನಿಸಿದರೂ  ಸಿವಿಲ್  ವ್ಯಾಜ್ಯ  ಇಟ್ಕೊಂಡು  ಕೋರ್ಟಿನಲ್ಲಿ  ವರ್ಷಾನುಗಟ್ಟಲೆ ಹೋರಾಟ ಮಾಡಿದವರನ್ನು ಕೇಳಿದರೆ ಅದರ ಸಂಕಷ್ಟದ ನಿಡಿಸುಯ್ಲು  ನಿಮಗೆ ಈ ಶಾಪದ ಬಿಸಿ ತಟ್ಟಿಸಬಹುದು .  ಕೆಲವೊಮ್ಮೆ ಈ ಸಿವಿಲ್ ವ್ಯಾಜ್ಯಗಳು  ಎರಡು ತಲೆಮಾರು  ದಾಟಿ ಮೂರನೇ ತಲೆಮಾರಲ್ಲಿ   ಪರಸ್ಪರ  ಮಾತುಕತೆಯೊಂದಿಗೆ ಮೊದಲಿದ್ದಲ್ಲಿ ಗೆ ಮುಗಿಯುವುದು ಇದರ  ಆಗಾಧತೆ .  ಅಷ್ಟರಲ್ಲಿ ವಕೀಲರ ಮೂರಂತಸ್ತಿನ  ಮನೆಯ  ಕಲ್ಲು ಸಿಮೆಂಟುಗಳಿಗೆ  ವ್ಯಾಜ್ಯದಾರರ  ಸರ್ವ ಸಂಪತ್ತು  ಸಂದಾಯವಾಗಿರುತ್ತದೆ . ಹಾಗಾಗಿಯೇ ಇರಬೇಕು ಕೋರ್ಟು ವ್ಯವಹಾರದಲ್ಲಿ  ಗೆದ್ದವನು ಸೋತ  ಸೋತವನು ಸತ್ತ ಅನ್ನೋ ಮಾತು ಹುಟ್ಟಿಕೊಂಡಿರುವುದು .  ಹಠಕ್ಕೆ ಬಿದ್ದು ದ್ವೇಷ  ,  ದ್ವೇಷದಿಂದ ವಿರಸ , ವಿರಸವೇ  ವಿಷ !      ಪ್ರಪಂಚದ ಇವತ್ತಿನ ಸ್ಥಿತಿ ನೋಡಿದವರಿಗೆ   ಮೂರು ದಿನದ ಬಾಳುವೆಗೆ  ಇದೆಲ್ಲಾ ಬೇಕಾ ? ಅನ್ನೋ ಪ್ರಶ್ನೆ ಖಂಡಿತಾ ಮೂಡದೇ ಇರದು!.  ಮನುಷ್ಯ ಇದನ್ನೆಲ್ಲಾ  ನೋಡುತ್ತಾ , ಅಳೆಯುತ್ತಾ  ಬೆಳೆದರೂ