Posts

Showing posts from January, 2019

kumaraswamy

ಮಾನ್ಯ ಹೆಚ್. ಡಿ.ಕುಮಾರ ಸ್ವಾಮಿಯವರು  ಮುಖ್ಯಮಂತ್ರಿಗಳು  ಕರ್ನಾಟಕ ಸರ್ಕಾರ. ಮಾನ್ಯರೇ. ತಾವು ತಿಳಿದಿರುವಂತೆ ತುಳು ಭಾಷೆ ಸುಮಾರು ಎರಡುಸಾವಿರ ವರ್ಷಗಳ ಹಳೆಯ ಇತಿಹಾಸವಿರುವ ಪಂಚ ದ್ರಾವಿಡ ಭಾಷೆಗಳಾದ ಕನ್ನಡ ತಮಿಳು ತೆಲುಗು ಮತ್ತು ಮಲಯಾಳಂ ಜತೆ ಸಮಾನ ಸ್ಥಾನ ಹಂಚಿಕೊಂಡ ಭಾಷೆ.  ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋದುದರಿಂದ ಇಂದು ಅಪಾರ ಸಾಂಸ್ಕೃತಿಕ ವೈಭವದ ತುಳು ಭಾಷೆ  ವಿಶ್ವಸಂಸ್ಥೆಯ ವರದಿಯ ಪ್ರಕಾರ ಅವನತಿಯ ಅಂಚಿನಲ್ಲಿರುವ ಭಾಷೆ. ತುಳುನಾಡು ಸಾಂಸ್ಕೃತಿಕವಾಗಿ ತನ್ನದೇ ಸೊಗಡನ್ನು ಮೈಗೂಡಿಸಿಕೊಂಡಿದ್ದರಿಂದ ಇಂದಿಗೂ ಜರ್ಮನಿ,ಫ್ರಾನ್ಸ್ ಮತ್ತು ಅಮೇರಿಕಾದಂತಹ ದೇಶಗಳ ವಿದ್ವಾಂಸರಿಗೆ ತುಳು ಭಾಷೆ ಸಂಶೋಧನೆಯ ಆಕರವಾಗಿರುವುದು ನಿತ್ಯ ಸತ್ಯ. ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ಬಹುಭಾಗ ಕರ್ನಾಟಕದಲ್ಲಿ ಸೇರಿಕೊಂಡುದರಿಂದ ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ಸಾಕಷ್ಟು ಕೊಡುಗೆಗಳನ್ನು ಸಾಂಸ್ಕೃತಿಕ ವಾಗಿ,ಮತ್ತು ಸಾಹಿತ್ಯಿಕವಾಗಿ ಕೊಡುತ್ತಾ ಬಂದವರು ತುಳುವರು. ಕರ್ನಾಟಕ ಸರಕಾರ ಕೂಡ ಆಗಾಗ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸಾಹಿತ್ಯ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಗಳನ್ನು ಸ್ಥಾಪಿಸಿದೆಯಾದರೂ ಕೆಲವಾರು ನಿಯಮಾತ್ಮಕ ಮಿತಿಗಳಿಂದ ಅವುಗಳು ತಮ್ಮ ಸಾಮರ್ಥ್ಯಕ್ಕೆ  ತಕ್ಕ ಕೆಲಸ ಮಾಡುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿವೆ. ಮೊದಲನೆಯದಾಗಿ ತುಳು ಭಾಷೆ ಎಂಟನೇ ಪರಿಚ್ಛೇದ ಕ್ಕೆ
ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿ ಧರ್ಮಸ್ಥಳ . ಪೂಜ್ಯರೇ  ತುಳು ಭಾಷೆಗೆ  ಮತ್ತು ಅದರ ಅಭಿವೃದ್ಧಿಗೆ  ಅನ್ವರ್ಥವಾಗಿ ಬೆಳೆದವರು ತಾವು . ತಾವು ೨೦೦೯ ರಲ್ಲಿ  ಆಯೋಜಿಸಿದ ವಿಶ್ವ ತುಳು ಸಮ್ಮೇಳನ  ನಡೆದ ನಂತರ  ತುಳುನಾಡಿನ  ತುಳು ಭಾಷಿಕರಲ್ಲಿ   ಆದ ಭಾಷಾಭಿಮಾನದ ಬೆಳವಣಿಗೆಯ  ಬಗ್ಗೆ  ಅಕ್ಷರಗಳಲ್ಲಿ ವಿವರಿಸುವುದು  ಕಷ್ಟಸಾಧ್ಯ .  ತುಳುವಿಗೆ ಒಂದು ಉನ್ನತ ಗೌರವ ಸ್ಥಾನ  ತಂದು ಕೊಡಬೇಕು ಎನ್ನುವ ತಮ್ಮ  ಪ್ರಯತ್ನ  ಅತ್ಯಂತ ಶ್ಲಾಘನೀಯ ನಂತರದ ದಿನಗಳಲ್ಲೂ  ನೀವು ತುಳು ಭಾಷೆಯನ್ನು  ಎಂಟನೇ ಪರಿಚ್ಛೇದಕ್ಕೆ  ಸೇರಿಸಲು ಸಮಯ ಸಂಧರ್ಭ  ಸಿಕ್ಕಿದ್ದಲ್ಲೆಲ್ಲಾ ಪ್ರಯತ್ನಿಸುವುದು  ಸ್ಮರಣೀಯ . ನಮ್ಮ ಪ್ರಧಾನ ಮಂತ್ರಿ ಮೋದಿಯವರನ್ನು ಮುಖತಃ ಭೇಟಿಯಾಗಿ    ಮನವಿ ಸಲ್ಲಿಸಿದ್ದು ಮತ್ತು ಮೋದಿಯವರು  ಶ್ರೀ ಕ್ಷೇತ್ರಕ್ಕೆ  ಬಂದಾಗ ಕೂಡಾ  ತುಳು ಭಾಷಿಗರ ಧ್ವನಿಯಾದದ್ದು , ಅದಕ್ಕೂ ಮೀರಿ ಇತ್ತೀಚೆಗೆ  ದುಬೈ ವಿಶ್ವ ಸಮ್ಮೇಳನದಲ್ಲಿ  ಮತ್ತೊಮ್ಮೆ ತಾನು ತುಳುವಿನ ಪರವಾಗಿ ಪ್ರಧಾನಿಯವರಿಗೆ ಧ್ವನಿಯಾಗುವ ಆಶ್ವಾಸನೆ ಕೊಟ್ಟಿರುವುದು  ಹೀಗೆ ನಮಗೆಲ್ಲ   ಅತ್ಯಂತ ವಿಶ್ವಾಸ ತುಂಬುವ ಕೆಲಸಮಾಡಿದ್ದೀರಿ  . ಇತ್ತೀಚಿನ ದಿನಗಳಲ್ಲಿ  ತುಳು ಯುವ ಸಮುದಾಯ ಕೂಡಾ  ಈ ವಿಷಯವನ್ನು ಗಂಭೀರವಾಗಿ ತೆಗೆದು ಕೊಂಡಿರುವುದು  ತಮಗೆ ತಿಳಿದೇ ಇದೆ.  ಯುವ ಸಮುದಾಯ ದಾರಿ ತಪ್ಪುವ ಮೊದಲೇ ನಾವೆಲ್ಲಾ  ಸೇರಿ  ತುಳು ಭಾಷೆಯ  ಅವನತಿಯನ್ನು ತಡೆದು  , ತು