'ಮಣ್ಣ ಬಾಜನದಲ್ಲಿ ಅಂತಹುದು ಏನಿದೆ ?'

'ಮಣ್ಣ  ಬಾಜನದಲ್ಲಿ   ಅಂತಹುದು ಏನಿದೆ ?'  ಕೆಲವರದ್ದು ಕುತೂಹಲದ ಪ್ರೆಶ್ನೆ ?
ನಿಜವಾಗಿಯೂ  ಅಂತಹುದು ಏನೂ ಇಲ್ಲ !
 ಹೆಚ್ಚಿನ ತುಳು ಕವನ ಸಂಕಲನಗಳಲ್ಲಿ  ಸಾಮಾನ್ಯವಾಗಿ  ಇರುವಂತೆ ತುಳುನಾಡಿನ ವರ್ಣನೆಯಾಗಲಿ , ಹಸಿರಿನ  ಪಸಿರಿನ ಸೊಬಗಾಗಲಿ  ದೈವ ದೇವರ  ಗುಣಗಾನವಾಗಲಿ  ಯಾವುದೂ ಇಲ್ಲಿಲ್ಲ! .
ಇವೆಲ್ಲವನ್ನೂ ಬಿಟ್ಟು..... 

ನಿಮ್ಮ - ನಮ್ಮ ಮನೆಯ  ಪರಿಸರದ   ದನ  ನಾಯಿ  ಕಾಗೆ  ಅಥವಾ ನಮ್ಮ ಮನೆಯಂಗಳದ ಕೆಲಸದ  ತನಿಯ, ನಮ್ಮೂರಿನ ದೈವದ ಕೋಲ ಕಟ್ಟುವ ದೋಗು , ಊರಿನ ಧಣಿ ಅಥವಾ ಅವರಿವರ ಮನೆಯಂಗಳಕ್ಕೆ ಅಡ್ಡಾಡಿ  ಕ್ಷೇಮ ಸಮಾಚಾರ ವಿಚಾರಿಸುವುದೇ ಜೀವನವಾಗಿರುವ ಕರಿಯಜ್ಜ  ಹೀಗೆ   ನಮ್ಮ ನಮ್ಮ ನೋವು ನಲಿವುಗಳನ್ನೇ ಹಂಚಿಕೊಂಡ  ಅಕ್ಷರಗಳು ಪದಗಳಾಗಿ   ಮಣ್ಣ  ಬಾಜನದೊಳಗಿರೋದು !  . ಹಾಗಾಗಿ ಬಹುಶ: ಇದನ್ನು ಓದುವಾಗ  ನಿಮಗೆ ನಿಮ್ಮ  ಮನೆ ಪರಿಸರ    ಮನದೊಳಗೆ   ಹಾಯಾಗಿ ನೀವೇ ಸಾಕಿದ ಮುದ್ದಿನ ಬೆಕ್ಕಿನಂತೆ ಅತ್ತಿಂದಿತ್ತ  ಸುಳಿದಾಡುತ್ತದೆ ಅನ್ನುವುದು ನನ್ನ ನಂಬಿಕೆ .

 ಗಜಲ್ ಬರಹ ತುಳುವಿಗೆ ತೀರಾ ಹೊಸದು . ಇತ್ತೀಚೆಗೆ ನಡೆಯುತ್ತಿರುವ ಹಲವಾರು  ಹೊಸ ಪ್ರಯೋಗಗಳಲ್ಲಿ   ಸ್ವಲ್ಪ   ವಿಭಿನ್ನ ಕೂಡಾ . ಶ್ರೀಮತಿ ವಿಜಯಲಕ್ಷ್ಮಿ ಕಟೀಲು  ಅವರು ಈ ಭಿನ್ನ  ಗಜಲ್ ಬರಹಗಳಲ್ಲಿ  ನುರಿತ ಕೈ .  ಮೂಲತಃ ವೃತ್ತಿಯಲ್ಲಿ  ಶಿಕ್ಷಕಿಯಾಗಿರುವ ಇವರು ಕವನಗಳನ್ನು  ಓದುವ ಮತ್ತು ಹಾಡುವ ರೀತಿ ಅನನ್ಯ ಮತ್ತು ಮಾನ್ಯ  . ಅಕ್ಷತರಾಜ್  ಪೆರ್ಲ ಆರಂಭಿಸಿದ ಯಶಸ್ವಿ ತುಳು ಕಬಿತೆ ಸಂಚಿಯಲ್ಲಿ   ಕವನ ಓದುವ ಒಂದು ಹೊಸ ಬಗೆಯನ್ನು   ನಾವು ಪ್ರಯತ್ನ ಪಟ್ಟೆವು . ಅದಕ್ಕೆ  ಜೀವ ತುಂಬಿದವರು  ಮುಂಬೈ ರಂಗ ಕಲಾವಿದ ಸುರೇಂದ್ರ ಮಾರ್ನಾಡು. ಅದು ಈಗ  ಎಲ್ಲಾ ಯುವ ಮನಸ್ಸುಗಳನ್ನು ತಟ್ಟಿದೆ  ಅನ್ನುವುದಕ್ಕೆ  ಮಕ್ಕಳೂ ಕವನ ಓದುವುದಕ್ಕೆ ಇಷ್ಟ ಪಡುವುದು  ಸಾಕ್ಷಿ . ಇದು ನಿಜವಾಗಿಯೂ ಭಾಷೆಯ ಬೆಳವಣಿಗೆಯ  ಹಾದಿ !

ವಿಜಯಲಕ್ಷ್ಮಿ ಕಟೀಲು ಕೂಡಾ  ಮಣ್ಣ  ಬಾಜನದ  ಒಂದು  ಹಾಡಿಗೆ  ತನ್ನ ಧ್ವನಿಯ ಏರಿಳಿತ ,  ಹಾವ ಭಾವಗಳಿಂದ  ಜೀವ ತುಂಬಿದ್ದಾರೆ . ಕವನ ವಾಚನವೆಂದರೆ ಬೇಸರಿಸುವವರನ್ನೂ ಒಮ್ಮೆ ಕಿವಿಗೊಟ್ಟು ಕೇಳುವಂತೆ  ದಿವ್ಯವಾಗಿ ಮತ್ತು ಸಹ್ಯವಾಗಿ  ಓದಿದ್ದಾರೆ!.
ಧಣಿ ದೀನ  ನುಪ್ಪುನು ನಾಯಿ ಆನಿ ಉಂಡುಜಿ
ದಾಯೆಗ್ ೦ದ್  ಎರೆಡಲಾ  ಪಂಡಿಜಿ !
ನಾಯಿಯ ಮೌನ ಪ್ರತಿಭಟನೆಗೆ  ಬೆಲೆ ಅಷ್ಟಕಷ್ಟೆ !

ಬಹುಶ  ನಮ್ಮ ನಮ್ಮ  ಮನೆಯ ನಾಯಿಯ ( ಕಂಟ್ರಿ  ಬ್ರೀಡು ) ಎದುರು  ಈ ಕವನ ಓದಿದರೆ ಅದೂ ಗಮನವಿಟ್ಟು ಕೇಳಿ
''ಇದು ನನ್ನದೇ ಕತೆ , ನನ್ನ ಮಗನ ಮನೆಯಲ್ಲೂ   ಮೊನ್ನೆ ಹೀಗೆ ಆಯ್ತು! '' ಎಂದು  ಬಾಲ ಅಲ್ಲಾಡಿಸಿದರೆ ನೀವೇನೂ  ಆಶರ್ಯ ಪಡಬೇಕಾಗಿಲ್ಲ !
ಒಮ್ಮೆ ಕೇಳಿ ನೋಡಿ  ಎನ್ನುವುದು ಸವಿನಯ  ಪ್ರಾರ್ಥನೆ

ಶಾಂತಾರಾಮ್ ಶೆಟ್ಟಿ
( ಕನ್ನಡದವರೂ ಈ ತುಳು ಕಬಿತೆ ಸಂಚಿಗೆ ತುಂಬಾ ಬೆಂಬಲಕೊಡುತ್ತಿರುವುದರಿಂದ ಕನ್ನಡದಲ್ಲಿ ಬರೆದೆ)



Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.