SN.  Sethuram.

23 January   ವಿಜ್ಞಾನ  ಓದು   ಹುಟ್ಟೂರು ಹಾಸನದ  ಅರಸೀಕೆರೆ

ನಾಟಕಗಳು : ನಿಮಿತ್ತ , ಗತಿ, ಅತೀತ , ಉಚ್ಚಿಷ್ಟ   ಮತ್ತು ಸ್ತ್ರೀ - 1981 ರಂಗಭೂಮಿ ಪ್ರವೇಶ 

ಕಥಾ ಸಂಕಲನ ; ನಾವಲ್ಲಾ  - ೭ ಮುದ್ರಣ , ಮಾಸ್ತಿ ಪ್ರಶಸ್ತಿ 

ನಿಮಿತ್ತ  ಗತಿ ದಹನ 

ಉದ್ಯೋಗ ; ಮೊದಲು ಭಾರತೀಯ ಅಂಚೆ ಇಲಾಖೆ  ನಂತರ   ಆದಾಯ ತೆರಿಗೆ ಇಲಾಖೆ 

೧). ಅಪವಾದದಿಂದಲೇ  ಆರಂಭಿಸುವ 

ನೀವು ಅತೀ ಆತ್ಮ ಗೌರವದ ವ್ಯಕ್ತಿ ಅನ್ನೋ ಅಪವಾದ  ಇದೆ   ಹೌದಾ ?

೨). ಅರಸೀಕೆರೆಯಿಂದ - ಬೆಂಗಳೂರಿನವರೆಗಿನ  ನಿಮ್ಮ ಜೀವನ ಪ್ರಯಾಣ  

೩. ಅಂಚೆ ಇಲಾಖೆಯಿಂದ  ಆದಾಯ ತೆರಿಗೆ ಇಲಾಖೆ  ಎತ್ತಣದಿಂದ  ಎತ್ತಣಕ್ಕೆ ಪಯಣ ?

೪. 1976ಎಮರ್ಜೆನ್ಸಿ  ಎಲ್ಲರೂ  ಬೈಯ್ಯುವಂತ  ಕಾಲ ಆದರೆ ನೀವು ಯಾಕೋ ಆ ಕಾಲವನ್ನು  ಹೊಗಳುತ್ತೀರಂತೆ  ಯಾಕೆ ?

೫. ಭ್ರಷ್ಟಾಚಾರದ ಬಗ್ಗೆ , ಸಾಮಾಜಿಕ ಅನೈತಿಕತೆ ಬಗ್ಗೆ ನೀವು  ನಿಮ್ಮ ನಾಟಕಗಳಲ್ಲಿ  ಮಾತಾಡುತ್ತೀರಿ , ಹಿಂದೆ ಮಾಸ್ಟರ್ ಹಿರಣ್ಣಯ್ಯನವರೂ  ಈ ಅನಿಷ್ಟಗಳ ಬಗ್ಗೆ   ಮಾತಾಡುತಿದ್ರು . ಆದರೆ ಅವರಿಗಿಂತ ನಿಮ್ಮ ನಾಟಕಗಳ ಭಿನ್ನತೆ ಏನು ? 

೭. ನೀವು  ಜೀವನದ  ಮೊದಲರ್ಧದಲ್ಲಿ  ಮಿತ ಮಾತಿನವರು , ನಂತರ (1986) ಅತಿ  ಮಾತುಗಾರನಾದದ್ದು ಹ್ಯಾಗೆ ?

೮. ಮಂಥನದ ಶಿವಶಂಕರ್  ರೆಡ್ಡಿ ಪಾತ್ರ  ನೀವು ಆದಾಯ ತೆರಿಗೆಯ  ವೃತ್ತಿ ಜೀವನದ   ಪ್ರಭಾವದಿಂದ ಹುಟ್ಟಿದ  ಪಾತ್ರನಾ/?

೯. ನಾಟಕ ಅಭಿನಯ  ಇದೆಲ್ಲ ಒಬ್ಬ ಕಲಾವಿದನನ್ನು ಸಾಕುವುದು  ಸಾಧ್ಯನಾ ? ಅಥವಾ ಬೇರೆ ವೃತ್ತಿ  ಬೇಕಾ?

೧೦. ಹುಟ್ಟು ಕಲಾವಿದರು  ಅನ್ನೋ  ಒಣ ಅಲಂಕಾರ ಕೆಲವರಿಗಿದೆ  ಇದು ಎಷ್ಟರ ಮಟ್ಟಿಗೆ ಸತ್ಯ 

೧೧. ಕೇಳು ಜನಮೇಜಯ ನಾಟಕದ  ಒಂದು ಚಾಲೆಂಜ್ ನಿಮ್ಮನ್ನು ಅಭಿನಯಕಾರನಾಗಿ  ರೂಪಿಸಿತು ಅಂತೀರಾ , ಆದರೆ ಈಗ ನಿಮ್ಮ ಅಭಿನಯ ನೋಡಿದಾಗ ನೀವೂ ಹುಟ್ಟು ಕಲಾವಿದರೋ ಏನೋ ಎನ್ನುವ ಭಾವನೆ ಬಂದು ಬಿಡುತ್ತದೆ . 

೧೨. ಮೊದಲ ಕಥಾ ಸಂಕಲನ  ನಿಮ್ಮ 63ನೇ ವಯಸ್ಸಲ್ಲಿ  ಬರುತ್ತೆ , ಬರೆಯುವ ಮೊದಲು ಮಾಗ   ಬೇಕು ಅನ್ನೋ ಕಾರಣವಾ ?

೧೩.  ಬರೆಹಕ್ಕೆ ಓದು ಎಷ್ಟು ಮುಖ್ಯ ಅಂತೀರಾ ? ಅನುಭವ  ಬರೆಸುವುದಿಲ್ವಾ ?

೧೪. ಬದುಕು ಮತ್ತು ಬರಹ  ಹಿಂದೆ ಹ್ಯಾಗಿತ್ತು ಈಗ ಹ್ಯಾಗೆ ಬದಲಾಗಿದೆ ?

೧೫.  ಸಾಮಾನ್ಯವಾಗಿ ಒಂದು ಕಥಾ ಸಂಕಲನ ಎಂದ್ರೆ ೧೦-೧೨ ಕಥೆಗಳಿರುತ್ತವೆ. ಆದರೆ ನಿಮ್ಮ ಕಥಾ ಸಂಕಲನಗಳಲ್ಲಿ   ೪ ಕತೆಗಳಿದ್ರೆ ಹೆಚ್ಚು .  ಕಥೆಗಳು  ಹೆಚ್ಚಾದಷ್ಟು ಏಕತಾನತೆ ಕಾಡುತ್ತೆ  ಅನ್ನಿಸುತ್ತಾ/

೧೬. ಹಣ ಮಾಡುವುದು ರೋಗ  ಅನ್ನೋದು ನಿಮ್ಮ ಹೇಳಿಕೆ. ಹಾಗಿದ್ರೆ  ಈ ರೋಗವನ್ನು ನಿಯಂತ್ರಿಸುವುದು ಹ್ಯಾಗೆ?

೧೬a  ಸಾಮಜಿಕ ಅನಿಷ್ಠ  ವ್ಯಕ್ತಿಗಳನ್ನು  ಸಮಾಜ ಹ್ಯಾಗೆ ಸ್ವೀಕರಿಸಬೇಕು   ಅನ್ನೋದನ್ನು  ನಾಟಕಗಳ ಮೂಲಕ ತಿಳಿಸೋದು ನಿಮ್ಮ ಆದ್ಯತೆನಾ ?೯ ( ಸಂತೋಷ್ ಹೆಗ್ಡೆಯವರು ಹೇಳ್ತಾರೆ  ಜೈಲಿಗೋದವರನ್ನು ಆರಿಸುವುದು  ಸಾಮಾಜಿಕ ಭ್ರಷ್ಟತನ ಅಂತ )

೧೭. ರಷಿಯನ್  ಸಾಹಿತಿಗಳಾದ ಟಾಲ್ಸ್ಟಾಯ್  ನಿಕೋಲೈ  ಗೊಗೊಲ್,  ಪುಸ್ಕಿನ್  ಇವರೆಲ್ಲ ನಿಮ್ಮ ಮೇಲೆ ಪ್ರಭಾವ ಬೀರಿದ ಸಾಹಿತಿಗಳು  , ಯಾಕೆ ?

೧೭a.  ಶಿವರಾಮ ಕಾರಂತರು ನಿಮ್ಮನ್ನು ತುಂಬಾ ಕಾಡಿದ ಕವಿ ಅಂತೀರಿ? ಯಾಕೆ ?

೧೮. ರಂಗ ಭೂಮಿಯಲ್ಲಿ ಆರ್ ನಾಗೇಶ್   ನೀವು ಅತೀ ಪ್ರೀತಿಸುವ ವ್ಯಕ್ತಿ ಅಂತ ಕೇಳಿದ್ವು . ಅವರ ಬಗ್ಗೆ ಹೇಳಿ 

೧೯.  ಸಂಬಂಧ ಗಳು ಅಳಿಯುವುದು ಉಳಿಯುವುದು  ಕ್ರಿಯೆಯಿಂದಲ್ಲ , ಪ್ರತಿಕ್ರಿಯೆಯಿಂದ ಅನ್ನುವುದು  ಮಂಥನದ ಒಂದು ಡೈಲಾಗ್ ವಿವರಿಸಲಿಕ್ಕೆ ಸಾಧ್ಯನಾ?

೨೦. ಹೆಣ್ಣಿನ ಒಳಗುದಿಯನ್ನು  ನೀವು ತುಂಬಾ ಸೂಕ್ಷ್ಮವಾಗಿ  ತೆರೆದಿಡುತ್ತೀರಿ ಅನ್ನುವ  ಹೊಗಳಿಕೆ ನಿಮಗಿದೆ . ಇದು ಹ್ಯಾಗೆ ಸಾಧ್ಯವಾಯ್ತು ?

೨೧. ಉಚ್ಚಿಷ್ಟ ನಾಟಕಕ್ಕೆ ಸಾಮಾಜಿಕ ಅನೈತಿಕತೆ  ಸ್ಪೂರ್ತಿಯಾಯ್ತಾ ?



 





Comments

Popular posts from this blog

ದೈವದ ನುಡಿ

ಬಲೀಂದ್ರ ಲೆಪ್ಪು

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.