Posts

Showing posts from June, 2025

H M Mahesh

 ಸಂಗೀತವನ್ನು ''ಸಂಗೀತಾ'' ದಿಂದ  ಮನೆ  ಮನ ಮುಟ್ಟಿಸಿದ ತುಳುನಾಡಿನ  ಹೆಮ್ಮೆ  H . M.  ಮಹೇಶ್!.   ------------------------------------ ಈ ಮಹಾನ್ ಮಹಾಲಿಂಗ  ಹುಟ್ಟಿರದಿರುತ್ತಿದ್ದರೆ ನಾವೆಲ್ಲಾ ''ಗಜಮುಖನೆ ಗಣಪತಿಯೇ ನಿನಗೆ ವಂದನೆ'', ''ಶರಣು ಶರಣಯ್ಯ ಶರಣು ಬೆನಕ'' ದಂತಹ  ಎಷ್ಟೋ ಹಳೆಯ ಸುಮಧುರ ಕನ್ನಡದ ಹಾಡುಗಳನ್ನು ಇವತ್ತಿಗೂ  ಕೇಳಲಾಗದ ಶಾಶ್ವತ  ಕಿವುಡರಾಗಿರಬೇಕಾಗಿತ್ತು!.   ಅದರಲ್ಲೂ ತುಳು ಭಾಷಿಗರಂತೂ  ಈ   ಸಂಗೀತಾ ಮಹಾತ್ಮನನ್ನು ಮರೆಯಲೇ ಬಾರದಿತ್ತು!. ಆದರೂ ಮರೆತಿದ್ದೇವೆ ಅನ್ನುವುದು ಕೂಡಾ ಅರಗಿಸಲಾಗದ ಸತ್ಯ .  ವೇದಿಕೆಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುವ  ನಿರೂಪಕರಾಗಲಿ , ಅವರಿಂದಲೇ ಬೆಳಗಿ ಬೆಳೆದ  ಹಾಡುಗಾರರಾಗಲಿ ಯಾರೂ  ಈ ಮಹಾಲಿಂಗನ  ಹೆಸರನ್ನು ಕಾಟಚಾರಕ್ಕೂ ಎಲ್ಲೂ ನೆನೆಯದೆ  ಪುನೀತರಾಗುವುದು  ಈ ಪ್ರಕೃತಿಯ ಅಗಣಿತ ಅಚ್ಚರಿಗಳಲ್ಲಿ ಒಂದು.  ''ಪಕ್ಕಿಲು ಮೂಜಿ ಒಂಜೇ ಗೂಡುಡು ಬದುಕೊಂದುಲ್ಲಗೆ ''   ಇದು ನನ್ನ ಸಂಸಾರದ ಪ್ರೀತಿ ಗೀತೆ , ''ಕೆಮ್ಮಲೆತ ಬ್ರಹ್ಮ ನನ್ನ  ಅಸ್ಮಿತೆ'' , ''ಡಿಂಗಿರಿ ಮಾಮ ಡಿಂಗಿರಿ  ಮಾಮ''   ನಮ್ಮ ತುಳುನಾಡ ಉತ್ತರಕುಮಾರ   ವೀರಗಾಥೆ, ''ಪೊನ್ನ ತೆಲಿಕೆಗ್ ಅರಲು ಮಲ್ಲಿಗೆ'',...