ಈ ಎರಡು ಘಟನೆಗಳು ನನ್ನಲ್ಲಿ ಅವರ ಬಗ್ಗೆ ಮತ್ತಷ್ಟು ವಿಶೇಷ ಗೌರವದ ಭಾವನೆಗಳನ್ನು ಹುಟ್ಟು ಹಾಕಿದ್ದಂತೂ ನಿಜ . ನಿಮ್ಮೊಡನೆ ಹಂಚಿ ಕೊಳ್ಳಲು ಈ ಸಮಯಕ್ಕಿಂತಲೂ ಸೂಕ್ತ ಇನ್ನೆಲ್ಲಿ ?
ಉಡುಪಿಯ ಮುದ್ದಣ ಮಂಟಪದಲ್ಲಿ ತುಳುಕೂಟದ ನಾಟಕ ಉತ್ಸವ ನಡೆಯುತ್ತಿತ್ತು . ಆ ದಿನದ ನಾಟಕದಲ್ಲಿ ಆ ಪಾತ್ರಧಾರಿ ತನ್ನ ಸಾಮರ್ಥ್ಯದ ಮಟ್ಟಿನ ಅಭಿನಯ ನೀಡಿದ್ದ . ನಾಟಕ ಮುಗಿದಾಗ ಸೀದಾ ವೇಷ ಕಳಚುವ ಕೋಣೆಯತ್ತ ನಡೆದ ಇವರು ಆತನನ್ನು ಅಭಿನಂದಿಸಲು ಮುಂದಾದರು . ವೇಷಧಾರಿ ವೇಷ ಕಳಚುವುದರಲ್ಲಿ ಮಗ್ನನಾಗಿದ್ದರಿಂದ ಬಂದವರ ಕಡೆ ಅಷ್ಟಾಗಿ ಗಮನಿಸಲಿಲ್ಲ . ಇವರು ಕಾದರು , ಕಾದರು , ಸುಮಾರು ಹತ್ತಿಪ್ಪತ್ತು ನಿಮಿಷಗಳ ಕಾಲ ಆತ ವೇಷ ಕಳಚಿ ಬರುವವರೆಗೆ ಕಾದು ಅವನ ಬೆನ್ನು ತಟ್ಟಿದರು, ಮೆಚ್ಚುಗೆಯ ನುಡಿಯಾಡಿದರು .
ತನ್ನ ಬೆನ್ನು ತಟ್ಟಿದ ವ್ಯಕ್ತಿ ಬಿರುದಾಂಕಿತ ಮಹಾನ್ ರಂಗ ಕಲಾವಿದ ಎಂದು ಗೊತ್ತಾಗಿ ಆ ವ್ಯಕ್ತಿಯ ಬಾಯಿಂದ ಕ್ಷಣ ಮಾತೇ ಹೊರಡಲಿಲ್ಲ !
ಇನ್ನೊಮ್ಮೆ ಕಪ್ಪಣ್ಣ ಅಂಗಳಕ್ಕೆ ಹೋದ ದಿನ. ಕಪ್ಪಣ್ಣನವರು ರಂಗ ಮಂದಿರದೊಳಗೆಲ್ಲಾ ಅಡ್ಡಾಡಿಸಿ ಅಲ್ಲೇ ವೇದಿಕೆಯ ಮೇಲೆ ಕೂರಲು ಹೇಳಿದರು .
ಇವರು ನಮ್ಮ ನಿಮ್ಮಂತೆ ನೇರ ಕೂರಲಿಲ್ಲ! .
ಪ್ರಧಾನಿ ಮೋದಿ ಸಂಸತ್ತು ಪ್ರೇವೇಶಿಸುವ ಮೊದಲು ಧೀರ್ಘ ನಮಸ್ಕರಿಸಿದಂತೆ ಆ ವೇದಿಕೆಗೆ ಎರಡೂ ಕೈಗಳಿಂದ ನಮಸ್ಕರಿಸಿ ನಂತರ ಪೀಠಾಧೀಶರಾದರು !
ಈ ಎರಡೂ ಘಟನೆಗಳನ್ನು ನೆನಪಿಸಲು ಕಾರಣವಾದ ವ್ಯಕ್ತಿ ಮುಂಬೈಯ ಮೇರು ರಂಗ ನಟ , ಮೋಹಕ ವ್ಯಕ್ತಿತ್ವದ , ಮೋಹನಾಂಗ ಮೋಹನ ಮಾರ್ನಾಡು !.
ಬಹುಶ: ಇಂತಹ ವೃತ್ತಿ ಅಭಿಮಾನವೇ ಅವರನ್ನು ಈ ಮಟ್ಟಕ್ಕೆ ಬೆಳೆಸಿರುವುದು !.
ಮಣ್ಣ ಬಾಜನದ ಕವನವನ್ನು ತಾನೂ ಓದುತ್ತೇನೆ ಎಂದರಂತೆ !
ಆಯ್ಕೆ ಮಾಡಿ, ತನ್ನದೇ ರಂಗ ಶೈಲಿಯಲ್ಲಿ ಓದಿದ್ದಾರೆ ಕೂಡಾ . ನನ್ನ ಮಣ್ಣ ಬಾಜನ ಖುಷಿಯಿಂದ ''ಟೈಂ '' ಎಂದು ಎಂದಿಗಿಂತ ಉದ್ದುದ್ದ, ಉದ್ದದ ಮುದ್ದಾದ ರಾಗ ಹೊರಡಿಸಿದ್ದು ನನ್ನ ಕಿವಿಯೊಳಗೆ ಇನ್ನೂ ಗೂಂಗುನಿಸುತ್ತಿದೆ !
ಮೋಹನ್ ಅಣ್ಣ ನಿಮಗಿದೋ ಅಭಿಮಾನ ಪೂರ್ವಕ ವಂದನೆಗಳು
ಶಾಂತಾರಾಮ್ ಶೆಟ್ಟಿ

Comments
Post a Comment