ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು
ಧರ್ಮಾಧಿಕಾರಿ
ಧರ್ಮಸ್ಥಳ .


ಪೂಜ್ಯರೇ
 ತುಳು ಭಾಷೆಗೆ  ಮತ್ತು ಅದರ ಅಭಿವೃದ್ಧಿಗೆ  ಅನ್ವರ್ಥವಾಗಿ ಬೆಳೆದವರು ತಾವು . ತಾವು ೨೦೦೯ ರಲ್ಲಿ  ಆಯೋಜಿಸಿದ ವಿಶ್ವ ತುಳು ಸಮ್ಮೇಳನ  ನಡೆದ ನಂತರ  ತುಳುನಾಡಿನ  ತುಳು ಭಾಷಿಕರಲ್ಲಿ   ಆದ ಭಾಷಾಭಿಮಾನದ ಬೆಳವಣಿಗೆಯ  ಬಗ್ಗೆ  ಅಕ್ಷರಗಳಲ್ಲಿ ವಿವರಿಸುವುದು  ಕಷ್ಟಸಾಧ್ಯ .  ತುಳುವಿಗೆ ಒಂದು ಉನ್ನತ ಗೌರವ ಸ್ಥಾನ  ತಂದು ಕೊಡಬೇಕು ಎನ್ನುವ ತಮ್ಮ  ಪ್ರಯತ್ನ  ಅತ್ಯಂತ ಶ್ಲಾಘನೀಯ
ನಂತರದ ದಿನಗಳಲ್ಲೂ  ನೀವು ತುಳು ಭಾಷೆಯನ್ನು  ಎಂಟನೇ ಪರಿಚ್ಛೇದಕ್ಕೆ  ಸೇರಿಸಲು ಸಮಯ ಸಂಧರ್ಭ  ಸಿಕ್ಕಿದ್ದಲ್ಲೆಲ್ಲಾ ಪ್ರಯತ್ನಿಸುವುದು  ಸ್ಮರಣೀಯ . ನಮ್ಮ ಪ್ರಧಾನ ಮಂತ್ರಿ ಮೋದಿಯವರನ್ನು ಮುಖತಃ ಭೇಟಿಯಾಗಿ    ಮನವಿ ಸಲ್ಲಿಸಿದ್ದು ಮತ್ತು ಮೋದಿಯವರು  ಶ್ರೀ ಕ್ಷೇತ್ರಕ್ಕೆ  ಬಂದಾಗ ಕೂಡಾ  ತುಳು ಭಾಷಿಗರ ಧ್ವನಿಯಾದದ್ದು , ಅದಕ್ಕೂ ಮೀರಿ ಇತ್ತೀಚೆಗೆ  ದುಬೈ ವಿಶ್ವ ಸಮ್ಮೇಳನದಲ್ಲಿ  ಮತ್ತೊಮ್ಮೆ ತಾನು ತುಳುವಿನ ಪರವಾಗಿ ಪ್ರಧಾನಿಯವರಿಗೆ ಧ್ವನಿಯಾಗುವ ಆಶ್ವಾಸನೆ ಕೊಟ್ಟಿರುವುದು  ಹೀಗೆ ನಮಗೆಲ್ಲ   ಅತ್ಯಂತ ವಿಶ್ವಾಸ ತುಂಬುವ ಕೆಲಸಮಾಡಿದ್ದೀರಿ  .

ಇತ್ತೀಚಿನ ದಿನಗಳಲ್ಲಿ  ತುಳು ಯುವ ಸಮುದಾಯ ಕೂಡಾ  ಈ ವಿಷಯವನ್ನು ಗಂಭೀರವಾಗಿ ತೆಗೆದು ಕೊಂಡಿರುವುದು  ತಮಗೆ ತಿಳಿದೇ ಇದೆ.  ಯುವ ಸಮುದಾಯ ದಾರಿ ತಪ್ಪುವ ಮೊದಲೇ ನಾವೆಲ್ಲಾ  ಸೇರಿ  ತುಳು ಭಾಷೆಯ  ಅವನತಿಯನ್ನು ತಡೆದು  , ತುಳು ಭಾಷೆಯನ್ನು  ಎಂಟನೇ ಪರಿಛೇದಕ್ಕೆ ಸೇರಿಸುವ  ಪ್ರಯತ್ನವಾಗಿ  ಇತ್ತೀಚೆಗೆ   ಬೆಂಗಳೂರಲ್ಲಿ ಸಭೆ ಸೇರಿ , ಪತ್ರಿಕಾಗೋಷ್ಠಿ ನಡೆಸಿ  ಎಲ್ಲ  ಜನಪ್ರತಿನಿಧಿಗಳನ್ನು    ಪತ್ರದ ಮೂಲಕ  ಸಾಧ್ಯವಾದಷ್ಟು ಜಾಗ್ರತ ಗೊಳಿಸಿ,   ಒತ್ತಡ ಹೇರಿ  ಅವರು ಸಂಸತ್ತು ಮತ್ತು ವಿಧಾನ ಸಭೆಯಲ್ಲಿ  ನಮ್ಮ ಪರ ಧ್ವನಿಯಾಗ ಬೇಕು ಎಂದು ವಿನಂತಿಸುವ  ಕಾರ್ಯಕ್ರಮ  ಹಮ್ಮಿ ಕೊಂಡಿದ್ದೇವೆ .  ಈ ಪತ್ರ  ಚಳುವಳಿಯು ಬೆಂಗಳೂರಿನ ಮತ್ತು ಇತರ ಊರಿನ ಎಲ್ಲ ತುಳುವ  ಸಂಘಗಳ ಬೆಂಬಲದೊಂದಿಗೆ  ತುಳು ಭಾಷೆ ಎಂಟನೇ ಪರಿಚ್ಛೇದ  ಸೇರುವ ವರೆಗೂ ಮುಂದುವರಿಯಲಿದೆ .   

 ತಾವು ಈ ನಮ್ಮ ನೆನಗುದಿಗೆ ಬಿದ್ದ   ಬೇಡಿಕೆಯನ್ನು  ಮತ್ತೊಮ್ಮೆ ಮೇಲ್ಮಟ್ಟದಲ್ಲಿ  ಮುಟ್ಟಿಸಲು  ತುಳುವರ ಧ್ವನಿಯಾಗಬೇಕು ಮತ್ತು  ತುಳುಭಾಷೆಯನ್ನು   ಈ ವರ್ಷದ ಅಂತ್ಯದೊಳಗೆ  ಎಂಟನೇ ಪರಿಚ್ಛೇದ ಮತ್ತು ರಾಜ್ಯದ ಅಧಿಕೃತ ಎರಡನೇ  ಭಾಷೆಯಾಗಿ  ಘೋಷಿಸುವಲ್ಲಿ  ಸಕ್ರೀಯ ಸಹಕಾರ ಕೊಡಬೇಕೆಂದು ಮನವಿ.

ತಮ್ಮ ಈ  ಎಲ್ಲಾ  ಪ್ರಯತ್ನಗಳಿಗೆ   ನಮ್ಮ ಎಲ್ಲ ತುಳುವರ ಬೆಂಬಲ ಸದಾ ನಿಮ್ಮೊಂದಿಗಿರುತ್ತದೆ  ಎನ್ನುವ ಭರವಸೆಯೊಂದಿಗೆ ತಮಗೆ ಈ ಪತ್ರ ಮನವಿ ಮಾಡಿಕೊಳ್ಳುತ್ತಿದ್ದೇವೆ.


ತುಳು ಎಂಟನೇ ಪರಿಚ್ಛೇದ   ಹೋರಾಟ ಸಮಿತಿ 
ಬೆಂಗಳೂರು

Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.