ಶ್ರೀ ಕೃಷ್ಣ ಪ್ರೇಮ


ಪ್ರೀತಿಯ ಪರಿಭಾಷೆ


 ಶ್ರೀ ಕೃಷ್ಣ ಪ್ರೇಮ

ಸಂಬಂಧ ಗಳಲ್ಲಿ  ಬಹು ಚರ್ಚಿತ ಸಂಬಂಧ ರಾಧಾ  ಕೃಷ್ಣೆಯರದು

ಒಂದು ಸಾರಿ ನಾರದರು  ಇದೆ ವಿಷಯ ವನ್ನು ಕೃಷ್ಣ ನಲ್ಲಿ  ಪ್ರಸ್ತಾಪಿಸಿ  ರುಕ್ಮಿಣಿ- ರಾಧೆಯರ  ಶ್ರೀ ಕೃಷ್ಣ ಪ್ರೇಮವನ್ನು ಒರೆಗೆ ಹಚ್ಚಲು  ನೋಡಿದರು
ತುಳಸಿ ದಳ ಮಾತ್ರೆನ ಶ್ರೀಕೃಷ್ಣ ನ ಮೇಲಿನ  ಪ್ರೀತಿ ಭಾರ ತೋರಿದ ಮಹಾಸತಿ ಒಂದೆಡೆ
ಪ್ರೇಮಿಗೆ  ಜೀವ- ಜೀವನ ಧಾರೆ ಎರೆದ ಮಹಾ ಪ್ರೇಮಿ ಇನ್ನೊಂದೆಡೆ

ಶ್ರೀ ಕೃಷ್ಣ  ನಕ್ಕು  ನಾರದರಿಗೆ   ಹೇಳಿದ ...

"ನಿಮ್ಮ ಜಿಜ್ಞಾಸೆ  ಎರಡು ಕಣ್ಣಿನ ದೃಷ್ಟಿಯ ನಡುವಿನ ಪರದೆ ಯಂತಿದೆ....   ಇರಲಿ  ಇದಕ್ಕೊಂದು ನಿದರ್ಶನ ಸಮೇತ ಉತ್ತರಿಸುತ್ತೇನೆ" ಎಂದು ಅವರನ್ನು ಹತ್ತಿರ ಕರೆದು ಅವರ ಕಿವಿಯಲ್ಲಿ ಏನೊ  ಉಸುರಿದ!
ನಾರದರು ನಕ್ಕು ತಲೆಯಲ್ಲಾಡಿಸಿ  ಹೊರಟರು...

ರುಕ್ಮಿಣಿಯ ಬಳಿ  ಬಂದ ನಾರದರು

ರುಕ್ಮಿಣಿ ಶ್ರೀ ಕೃಷ್ಣನಿಗೆ ವಿಪರೀತ ತಲೆನೋವು , ವೈದ್ಯರನ್ನು ಕೇಳಿದಾಗ  ರುಕ್ಮಿಣಿಯ ಕಾಲು ತೊಳೆದ ನೀರು ಕುಡಿದರೆ ಶೂಲೆ  ಶಮನ ವಾಗುವುದು ಎಂದು ತಿಳಿಸಿದ್ದಾರೆ . ತಾವು ದಯವಿಟ್ಟು ಆ ಕೆಲಸ ಮಾಡಬೇಕು ಎನ್ನುತ್ತಾರೆ

 ಈ ಮಾತು ಕೇಳಿ ರುಕ್ಮಿಣಿ ಗಾಬರಿಯಾಗಿ  ಕಿವಿ ಮುಚ್ಚಿ ಕೊಳ್ಳುತ್ತಾಳೆ . ತನ್ನ ಪ್ರೀತಿ ಪಾತ್ರ ನಿಗೆ ತನ್ನ ಕಾಲು ತೊಳೆದ ನೀರು ಕುಡಿಸುವುದೆ ? ಇಂತಹ ಘೋರ ನರಕಕ್ಕೆ ನಾನು ಪಾತ್ರಳಾಗಬೇಕೆ?  ಸಾಧ್ಯವಿಲ್ಲ , ನನ್ನ ಜೀವ ಹೋದರು ನನ್ನ ಸ್ವಾಮಿಗೆ ಅಪಚಾರವಾಗುವಂತಹ ಕೆಲಸ ಕನಸಿನಲ್ಲಿಯೂ  ಮಾಡಲಾರೆ  ಎನ್ನುತ್ತಾಳೆ.

ನಾರದರು ರುಕ್ಮಿಣಿಯ ಶ್ರೀ ಕೃಷ್ಣ ಪ್ರೇಮದ  ಉತ್ಕಟತೆ  ಅರಿತು ಸಂತೋಷ ಪಡುತ್ತಾರೆ. ಇನ್ನೆನಿದ್ದರೋ ರಾಧೆ ಸೋತಂತೆ !

ರಾಧೆಯ ಬಳಿಗೆ ಬಂದು  ನಾರದರು ರುಕ್ಮಿಣಿ ಯಲ್ಲಿ ಹೇಳಿದಂತೆ ಹೇಳಿದಾಗ ...

ರಾಧೆ  ಹಿಂದೆ ಮುಂದೆ ಆಲೋಚಿಸದೆ.....
ನನ್ನ ಕಾಲು ತೊಳೆದ ನೀರು ಶ್ರೀ ಕೃಷ್ಣನ ನೋವನ್ನು ಹೋಗಲಾಡಿಸುವುದಾದರೆ  ನನ್ನ ಜೀವನ  ಧನ್ಯ . ನನ್ನ ಸ್ವಾಮಿಯ ತಲೆ ಶೂಲೆ ನಿವಾರಣೆಯಾಗುವುದಾದರೆ  ಎಂತಹ ಕಾರ್ಯಕ್ಕೂ ನಾನು ಸಿದ್ದ . ಅಂತಹ  ಪಾಪ ಕಾರ್ಯ ದಿಂದ ಯಾವ ರೌದ್ರ ನರಕ ಬಂದರೂ ಸ್ವೀಕರಿಸಲು ಸಿದ್ದ " ಎನ್ನುತ್ತಾ  ತನ್ನ ಕಾಲು ತೊಳೆದ ನೀರು ಕೊಡಲು ಸಿದ್ದಳಾಗುತ್ತಾಳೆ  .

ನಾರದರು ರಾಧೆಯ  ಶ್ರೀಕೃಷ್ಣ ಪ್ರೇಮದ ಉತ್ತುಂಗವರಿತು ನಿರುತ್ತರರಾಗುತ್ತಾರೆ

ಪ್ರೀತಿ ಸಂಬಂಧ  ಯಾವುದೇ ಲೌಕಿಕ- ಸಾಮಾಜಿಕ  ಬಂಧನಗಳಿಗೆ ಮೀರಿದ ಹೃದಯಗಳ ಬೆಸುಗೆ ! ಸಂಬಂಧದ ಮೊಹರಿನ ಮೇರೆ ಮೀರಿ ನಿಂತ ಭಾವ !




ಹಾಗಾಗಿ ರಾಧೆ ಇಂದಿಗೂ ಚಿರ ಪ್ರೇಮಿ! 

Comments

Popular posts from this blog

ಬಲೀಂದ್ರ ಲೆಪ್ಪು

ದೈವದ ನುಡಿ

ಮದಪೆರಾವಂದಿ ತುಳು ಪದೊಕುಲು ....ಗೊಂಚಿಲ್!.