ನಮ್ಮ ಬಿತ್ತಿಲಿನಲ್ಲಿ .........
ನಮ್ಮ ಬಿತ್ತಿಲಿನಲ್ಲಿ ಈ ವರ್ಷ ಪೆಲಕ್ಕಾಯಿ ತುಂಬಾ ಉಂಟು. ಪೆಲಕ್ಕಾಯಿ ಬಿತ್ತಿಲಿನ ಮರಗಳಲ್ಲಿ ಇರುವುದು. ನಮ್ಮ ಹಳೆಯ ಮರಗಳನ್ನೆಲ್ಲಾ ಕಳೆದ ಮರಿಯಾಲ ಮುಗಿದ ನಂತರ ಕಡಿದದ್ದು. ಮಿತ್ತ ಪುಣಿಯಲ್ಲಿ ಹೊಸ ಮನೆ ಕಟ್ಟಿದ್ದಕ್ಕೆ ಪೆಲತ ಮರತ ಬಾಕಿಲು ಕಿಟಿಕಿ ಮಾಡಿದ್ದು. ಬಿತ್ತಿಲಿನಲ್ಲಿ ಹೊಸ ಮರಗಳು ಬಂದದ್ದು ನಮಗೆ ಗೊತ್ತಾದದ್ದು ಹಳೆ ಮರಗಳನ್ನು ಕಡಿದಾಗಲೇ. ನಾವೆಣಿಸಿದ್ದು ಈ ವರ್ಷ ಪೆಲಕ್ಕಾಯಿ ಸಿಗಲಿಕ್ಕಿಲ್ಲ ಎಂದು. ಆದರೆ ಬಿತ್ತಿಲಿನ ಎಲ್ಲಾ ಹೊಸ ಮರಗಳಲ್ಲಿ ಈ ವರ್ಷ ಎಂಚಿನ ಪಸಲ್ ಮಾರಯ್ರೆ. ಒಂದು ಮರದಲ್ಲಿ ಮಾತ್ರ ನೋಡಬೇಕು. ಸಪೂರದ ಗೆಲ್ಲಿನಲ್ಲಿ ಕೂಡ ಗುಜ್ಜೆ ಆಗಿದೆ. ಗುಜ್ಜೆ ದೊಡ್ಡದು ಆದರೆ ನಮ್ಮ ಮರದ ಎಗೆ ತುಂಡಾಗಿ ಕೆಳಗೆ ಬೀಳ ಬಹುದು ಅಂತ ಅದನ್ನು ಕಜಿಪು ಮಾಡಲಿಕ್ಕೆ ಹೇಳಿದ್ದು. ಈಗ ಈ ಮಳೆಗೆ ಪರ್ಂದ್ ಪೆಲಕ್ಕಾಯಿ ಯಾರಿಗೆ ಬೇಕು ಹೇಳಿ. ಸುಮ್ಮನೆ ಅದು ಬಿದ್ದು ಹಾಳಾಗುತ್ತದೆ. ಬಿತ್ತಿಲಿಗೆ ಹೊಗಲಿಕ್ಕೆ ಆಗುವುದಿಲ್ಲ. ಉಮಿಲ್ ಅಂದ್ರೆ ಮಾರಾಯ್ರೆ ಬೈರಾಸು ಸುತ್ತಿಕೊಂಡು ಎಲ್ಲಿಯಾದರೂ ಹೋದೆವಾ ನಮ್ಮ ಕಾಲು ಕೂಡ ಪೆಲಕ್ಕಾಯಿಯ ರೆಚ್ಚೆಯ ಹಾಗೆ ಆಗುತ್ತದೆ. ಉಮಿಲ್ ತುಚ್ಚಿ.
ಪೆಲಕ್ಕಾಯಿ ಮರದಲ್ಲೇ ಪರಿಂದಿದರೆ ಈ ಮಳೆಗೆ ಅದು ಅಷ್ಟು ರುಚಿ ಇರುವುದಿಲ್ಲ ಎಂದು ಒಳ್ಳೆ ಬುಲೆತ್ ನೋಡಿ ಮೊದಲೇ ಕಡ್ಪಿ ಅದನ್ನು ಸ್ವಲ್ಪ ಬೆಚ್ಚ ಜಾಗದಲ್ಲಿ ಇಟ್ಟರೆ ಅದು ಸೀಪೆ ಸೀಪೆ ಆಗುತ್ತದೆ. ಪೆಲಕ್ಕಾಯಿ ಮೂರಲಿಕ್ಕೆ ಮಾತ್ರ ಈಗ ಯಾರು ದುಂಬು ಬರುವುದಿಲ್ಲ. ಕೈಯಲ್ಲಿ ಮೇಣ ಆಗುತ್ತದೆ ಅಂತ. ಅದಕ್ಕೆ ಕೆಲವರು ಒಂದಾ ಮೊದಲೇ ತಾರಾಯಿದೆಣ್ಣೆ ಕೈಗೆ ಪೂಜಿ ಮೇಣ ಅಂಟದಂತೆ ನೋಡ್ತಾರೆ. ಇಲ್ಲದಿದ್ದರೆ ಮೂರಿದ ನಂತರ ತಾರಾಯಿದೆಣ್ಣೆ ಪೂಜುತ್ತಾರೆ.
ಮೊನ್ನೆ ಹೀಗೆಯೇ ನಾನು ಕೊಟ್ಯದಲ್ಲಿದ್ದ ಪೆಲಕ್ಕಾಯಿ ಪರಿಂದಿದೆ ಎಂದು ಪರಿಮಳ ಬರುವಾಗ ಅದನ್ನು ಮೂರಲಿಕ್ಕೆ ಕುಳಿತ್ತದ್ದು. ನಾನು ಮೊದಲೇ ತಾರಾಯಿದೆಣ್ಣೆ ಪೂಜಿಲಿಕ್ಕೆ ಮರೆತ್ತದ್ದು. ಮತ್ತೆ ಎಂತ ಮಾಡುವುದು. ಆಗಲಿ ಅಂತ ಮುಂದುವರಿಸಿದ್ದೇ. ಇಡೀ ಪೂರಾ ಪೆಲಕ್ಕಾಯಿ ಮೂರಿದ್ದು. ನಾಕು ನಾಕು ಪಚ್ಚಿಲ್ ಅಂತ ಹೇಳಿ ಎಲ್ಲರೂ ತಿಂದು ಪೆಲಕ್ಕಾಯಿ ಮುಗಿಯಿತು. ನಾನು ಮೇಣವನ್ನು ಕೈಗೆ ಕಾಲಿಗೆ ತಲೆಗೆ ಎಂದು ಎಲ್ಲ ಕಡೆ ಅಂಟಿಸಿದ್ದು. ಅದು ಉಮಿಲ್ ಓಡಿಸಬೇಕಲ್ಲವಾ. ಅದಕ್ಕೆ.
ಕೈಗೆ ಅಂಟಿದನ್ನು ಬಿಡಿಸುವುದು ಹೇಗೆ ಅಂತ ಮಂಡೆಬೆಚ್ಚದಲ್ಲಿದ್ದೆ. ತಾರಾಯಿದೆಣ್ಣೆ ಹಾಕಿದರೂ ಅದು ಸುಲಭದಲ್ಲಿ ಬಿಡಬೇಕಲ್ಲವ.
ಅಂಟುವುದು ಅದರ ಗುಣ. ಬೆಚ್ಚ ನೀರು ಹಾಕಿ ತೊಳೆದರೆ ಎಂಚಾ ಎಂದು ಕೂಡಾ ನೋಡಿ ಆಯಿತು. ಅದು ಮಯಣ ಮಾರಾಯ, ಕೈ ಬಿಡುವುದಿಲ್ಲ. ಅದು ಒಮ್ಮೆಗೇ ಹೋಗಲಿಕ್ಕಿಲ್ಲ. ನಿಧಾನವಾಗಿ ಹೋಗಬಹುದು. ನಾಳೆ ಆಗುವಾಗ ಎಲ್ಲಾ ಹೋಗಬಹುದು ಅಂತಾ ಎಲ್ಲ ಹೇಳಿದರು. ಯಾರೋ ಹೇಳಿದರು ಅಂತ ಅದು ಹೋಗುತ್ತದೋ. ಅಂಟಿದ್ದು ನನ್ನ ಕೈಗೆ ಅಲ್ಲವೋ. ಅದರ ಉಪದ್ರ ನನಗೆ ಮಾತ್ರ ಗೊತ್ತು ಅಲ್ಲವ.
ದಿಲ್ಲಿಯ ನಾಯ್ಕರು ಹೇಳಿದರೆ ಅದು ಬಿಡುತ್ತದೋ. ನಮ್ಮ ಕೈಗೆ ಎಷ್ಟು ಹೊತ್ತು ಅದು ಅಂಟಿಕೊಂಡಿರುತ್ತದೋ ಅಷ್ಟೂ ಹೊತ್ತು ನಮ್ಮ ಕೈ ಮತ್ತೆ ಮೈ ಎಲ್ಲಾ ಪೆಲಕ್ಕಾಯಿ ಪರಿಮಳ ಬರುತ್ತದೆ. ಹಾಗೆ ನಾವು ಎಲ್ಲಿಯಾದರೂ ಹೊರಗೆ ಜಗಲಿಯಲ್ಲಿ ಕುಳಿತೆವೋ ಅಲ್ಲಿಗೆ ನಾಯಿ ಕೂಡ ಬಂದು ನಮ್ಮನ್ನು ಮೂಸುತ್ತದೆ. ಅದಕ್ಕೆ ಹೇಳುವುದು, ಪೆಲಕ್ಕಾಯಿ ಮೂರಿದವರಿಗೆ ಮಾತ್ರ ಗೊತ್ತು ಅದರ ಸುಖ ಅಥವಾ ದುಃಖ. ನಾವು ಪೆಲಕ್ಕಾಯಿ ಪರಿಮಳ ಬರುತ್ತೇವೆ ಅಂತ ಹೇಳಿ ಇದ್ದ ಕಾಟುನಾಯಿಗಳಿಂದ ಮೂಸಿಸಲ್ಪಡಿಲಿಕ್ಕೆ ಆಗುತ್ತದೋ? ಪೆಲಕ್ಕಾಯಿ ನಾವೆ ಮೂರಿದ್ದು ಎಂದುದರಿಂದ ಅಲ್ಲವೋ ನಾವೇ ಪೆಲಕ್ಕಾಯಿ ಪರಿಮಳ ಬರುವುದು. ಪೆಲಕ್ಕಾಯಿ ತಿಂದವರು ಸ್ವಲ್ಪ ಹೊತ್ತು ಪೆಲಕ್ಕಾಯಿ ಪರಿಮಳ ಬರಬಹುದು. ನಾವು ಮೂರಿದ್ದರಿಂದ ನಾವು ತಿಂದಿದ್ದೇವೆ ಅಂತ ಕಾಟುನಾಯಿ ಕೂಡ ನಮ್ಮನ್ನು ಮೂಸಿಲಿಕ್ಕೆ ಬರುತ್ತದೆ.
ಈ ಮಳೆಗೆ ಎಲ್ಲಿಗೂ ಹೋಗಲಿಕ್ಕೆ ಆಗುವುದಿಲ್ಲ ಎಂದು ಆಚೆ ತೋಟದ ಭಟ್ರು ಮತ್ತು ಈಚೆ ತೋಟದ ಶೆಟ್ರು ಟಿವಿ ನೋಡಿ ನೋಡಿ ಕಣ್ಣು ಕೆಂಪು ಮಾಡಿಕೊಂಡು ಬಯ್ಯದ ಪೊರ್ತುಗು ಮಳೆ ಬಿಟ್ಟಾಗ ನಮ್ಮ ಬಿತ್ತಿಲಿನ ಹತ್ತಿರದಲ್ಲಿ ಮಾತಾಡುವುದು ಕೇಳಿ ನಾನು ಕೂಡ ಅಲ್ಲಿಗೆ ಹೋದರೆ ಅವರು ಎಂತ ಹೇಳುವುದು ಗೊತ್ತುಂಟಾ? ಪೆಲಕ್ಕಾಯಿ ಮೂರಿ ಬಂದದ್ದಾ ಎಂದು. ನಾನು ಹೇಳಿದೆ ನೀವು ಎಂತದ್ದು ಮಾಡಿದ್ದು ಪುಲ್ಯದಿಂದ ಬಯ್ಯ ಮುಟ್ಟ ಎಂದು. ಅವರು ಹೇಳಿದರು: ಮುಖ್ಯಮಂತ್ರಿಗಳು ಯಾವಾಗ ರಾಜೀನಾಮೆ ಕೊಡುತ್ತಾರೆ ಅಂತ ಕಾದು ಕಾದು ಸಾಕಾಯಿತು ಅಂತ. ಕಾದು ಕಾದು ನೀವು ಮುದುಕರಾಗುವಿರಿ. ಅವರು ರಾಜೀನಾಮೆ ಕೊಡುವ ಹಾಗೆ ಕಾಣುವುದಿಲ್ಲ. ಅವರು ಅಧಿಕಾರಕ್ಕೆ ಅಂಟಿದ್ದಾರೆ ಮಾರಾಯ್ರೆ, ನನ್ನ ಮೈಗೆ ಪೆಲಕ್ಕಾಯಿ ಪರಿಮಳ ಅಂಟಿದ ಹಾಗೆ, ಎಂದೆ. ನಾಳೆ ಅಮಾಸೆ ಮುಗಿಯಲಿ. ಮತ್ತೆ ನೋಡುವಾ ಆಯಿತಾ.
ಕೃಪೆ : ಸ್ವಾತಿ ಶೆಟ್ಟಿ , ತುಳುನಾಡ ನೆನಪು.

Comments
Post a Comment