ವಿಜಯನಾರಸಿಂಹ
ಬೆನಕನ ಜೊತೆ ಇವರನ್ನೂ ನೆನೆಯೋಣ ಕೊನೆ ತನಕ. ಹಾಡುಗಳು ಕಾಡುವುದು ಅದಕ್ಕೆ ಅಂಟಿಕೊಂಡಂತಹ ನಮ್ಮ ಹಲವು ಹಳೆಯ ನೆನಪುಗಳ ಕಾರಣದಿಂದ .... ಆಟಿ ಅಥವಾ ಆಷಾಡ ತಿಂಗಳ ಕಷ್ಟ - ಕಾಯಿಲೆ , ಮತ್ತು ಕಡು ಜಡತ್ವದಿಂದ ಹೊರಬರಬೇಕಾದರೆ ಶ್ರಾವಣದ ಸೊಬಗು ನಿಮ್ಮ ಮನದಂಗಳದಲ್ಲಿ ನಲಿಯೋವರೆಗೆ ಕಾಯಬೇಕು. ಬೇಂದ್ರೆಯವರಂದಂತೆ ಶ್ರಾವಣ ಬರುವ ದಾರಿಯಲ್ಲೆಲ್ಲಾ ಅನಿಯಮಿತ ನಗುವು ,ನಲಿವು. ಶ್ರಾವಣದಲ್ಲಿ ಅನಾಯಾಸವಾಗಿ ನೆನಪಾಗುವ ಮತ್ತೊಂದು ಹೆಸರೇ ವಿಜಯನಾರಸಿಂಹ ಅವರದು. ಅದಕ್ಕೆ ಒಂದು ಬಲವಾದ ಕಾರಣವೂ ಇದೆ. ಹಳ್ಳಿಯ ಪರಿಸರದಲ್ಲಿ ಜಡಿಮಳೆಯ ಕೊಚ್ಚೆಯಲ್ಲಿ ಕಿಚಿಗುಟ್ಟಿ ಮುದುಡಿದ ಮನಸ್ಸಿಗೆ ದೂರದ ಬೆಟ್ಟದ ದೇವರ ಗುಡಿಯಿಂದಲೋ ,ಸಿನಿಮಾ ಟೆಂಟಿಂದಲೋ ಅಥವಾ ಮಂಗಳ ಕಾರ್ಯಕ್ಕೆ ಅಣಿಯಾದ ಅಕ್ಕ ಪಕ್ಕದ ಮನೆಯಿಂದಲೋ ಮುದಕೊಡುವ ಶ್ರಾವಣದ ಮೊದಲ ಹಾಡೋ ಎಂಬಂತೆ ಹಾಡೊಂದು ಮಂದ ಶೀತ ಮಾರುತದ ತಂಪಿನೊಂದಿಗೆ ಕಿವಿಯ ಪಕ್ಕ ತೇಲಿ ಹೋಗುತ್ತದೆ. ಪಿ ಬಿ ಶ್ರೀನಿವಾಸ್ ಅವರ ಮಧುರ ಧ್ವನಿಯ ಹಾಡದು ಶರಣು ಶರಣಯ್ಯ ಶರಣು ಬೆನಕ... "ಕಾಡುವುದು ಕಾವ್ಯ" ಇದು ಕವಿ ಶ್ರೇಷ್ಠ ಸುಬ್ರಾಯ ಚೊಕ್ಕಾಡಿಯವರು ಕಾವ್ಯಕ್ಕೆ ಕೊಡುವ ಅತಿ ಚಿಕ್ಕ ...