kumaraswamy
ಮಾನ್ಯ ಹೆಚ್. ಡಿ.ಕುಮಾರ ಸ್ವಾಮಿಯವರು ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ. ಮಾನ್ಯರೇ. ತಾವು ತಿಳಿದಿರುವಂತೆ ತುಳು ಭಾಷೆ ಸುಮಾರು ಎರಡುಸಾವಿರ ವರ್ಷಗಳ ಹಳೆಯ ಇತಿಹಾಸವಿರುವ ಪಂಚ ದ್ರಾವಿಡ ಭಾಷೆಗಳಾದ ಕನ್ನಡ ತಮಿಳು ತೆಲುಗು ಮತ್ತು ಮಲಯಾಳಂ ಜತೆ ಸಮಾನ ಸ್ಥಾನ ಹಂಚಿಕೊಂಡ ಭಾಷೆ. ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋದುದರಿಂದ ಇಂದು ಅಪಾರ ಸಾಂಸ್ಕೃತಿಕ ವೈಭವದ ತುಳು ಭಾಷೆ ವಿಶ್ವಸಂಸ್ಥೆಯ ವರದಿಯ ಪ್ರಕಾರ ಅವನತಿಯ ಅಂಚಿನಲ್ಲಿರುವ ಭಾಷೆ. ತುಳುನಾಡು ಸಾಂಸ್ಕೃತಿಕವಾಗಿ ತನ್ನದೇ ಸೊಗಡನ್ನು ಮೈಗೂಡಿಸಿಕೊಂಡಿದ್ದರಿಂದ ಇಂದಿಗೂ ಜರ್ಮನಿ,ಫ್ರಾನ್ಸ್ ಮತ್ತು ಅಮೇರಿಕಾದಂತಹ ದೇಶಗಳ ವಿದ್ವಾಂಸರಿಗೆ ತುಳು ಭಾಷೆ ಸಂಶೋಧನೆಯ ಆಕರವಾಗಿರುವುದು ನಿತ್ಯ ಸತ್ಯ. ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ಬಹುಭಾಗ ಕರ್ನಾಟಕದಲ್ಲಿ ಸೇರಿಕೊಂಡುದರಿಂದ ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ಸಾಕಷ್ಟು ಕೊಡುಗೆಗಳನ್ನು ಸಾಂಸ್ಕೃತಿಕ ವಾಗಿ,ಮತ್ತು ಸಾಹಿತ್ಯಿಕವಾಗಿ ಕೊಡುತ್ತಾ ಬಂದವರು ತುಳುವರು. ಕರ್ನಾಟಕ ಸರಕಾರ ಕೂಡ ಆಗಾಗ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸಾಹಿತ್ಯ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಗಳನ್ನು ಸ್ಥಾಪಿಸಿದೆಯಾದರೂ ಕೆಲವಾರು ನಿಯಮಾತ್ಮಕ ಮಿತಿಗಳಿಂದ ಅವುಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿವೆ. ಮೊದಲನೆಯದಾಗಿ ತುಳು ಭ...