ಕೆ . ಎಲ್. ಕುಂಡಂತ್ತಾಯರಲ್ಲಿ ಒಬ್ಬ ಆಳದಾಳದ ವಿಶ್ಲೇಷಕರನ್ನು ಕಂಡಂತಾಯಿತು !
ಕೆ . ಎಲ್. ಕುಂಡಂತ್ತಾಯರಲ್ಲಿ ಒಬ್ಬ ಆಳದಾಳದ ವಿಶ್ಲೇಷಕರನ್ನು ಕಂಡಂತಾಯಿತು ! ---------------------------------------------------------------------------------------------- ಬಹುಶ:ಈ ಬೆಂಗಳೂರಿನ ಜ೦ಜಡಗಳ ನಡುವೆ ನಾನು ಓದು ಮರೆತು ಅದೆಷ್ಟೋ ವರ್ಷಗಳಾಗಿದ್ದವು ಅಂದರೂ ತಪ್ಪೇನಿಲ್ಲ ! ''ಮಣ್ಣಬಾಜನ'' ಕವನ ಸಂಕಲನ ಬರೆಯುವಾಗ ನನ್ನಲ್ಲಿ ಓದುವಿಕೆಗಿಂತಲೂ ಇದ್ದಿದ್ದು ತುಳು ಜೀವನದ ಬಾಲ್ಯ ಸಾಂಗತ್ಯ ! ನನ್ನ ಮನೆಯಂಗಳದಲ್ಲಿ ಕೃಷಿ ಒತ್ತಟ್ಟಿನವರ ನಡುವೆ ಆಡಿ ನಲಿದ ಭಾಷೆಯನ್ನೇ ಹಾಡುಗಳಾಗಿ ಇಲ್ಲಿ ನೇಯ್ದಿರುವುದು ! ಪುಸ್ತಕ ಮುಂಬೈ , ಬೆಂಗಳೂರು ಮತ್ತು ಕೊನೆಗೆ ಮಂಗಳೂರಲ್ಲಿ ಹೀಗೆ ಮೂರು ಪ್ರಮುಖ ನಗರಗಳಲ್ಲಿ ಬಿಡುಗಡೆಯಾಗಿ ತುಳು ಭಾ ಷೆಯ ಮಟ್ಟಿಗೊಂದು ಅನನ್ಯ ತಂಪಿನ ಅನುಭವ ತಂದು ಕೊಟ್ಟಿರುವುದು ನಿಜಕ್ಕೂ ಸಂತೋಷ ! ಮಂಗಳೂರು ಆಕಾಶವಾಣಿಯ ''ಸ್ವರಮಂಟಮೆ'' ಪುಸ್ತಕ ಬುಡುಗಡೆಯ ವಿಶಿಷ್ಟ ಕಾರ್ಯಕ್ರಮದಲ್ಲಿ ಈ ಪುಸ್ತಕದ ಅನಾವರಣದ ಹೊಣೆ ಹೊತ್ತವರು ಖ್ಯಾತ ಪತ್ರಕರ್ತ , ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತ್ತಾಯ. ಬರೇ ಕೇಳಿ ತಿಳಿದ ಹೆಸರು , ಮುಖ ಪರಿಚಯವಿಲ್ಲದಿದ್ದರೂ ಅವರ ಗಡಸು ಧ...