ನಮ್ಮ ಬಿತ್ತಿಲಿನಲ್ಲಿ .........
ನಮ್ಮ ಬಿತ್ತಿಲಿನಲ್ಲಿ ಈ ವರ್ಷ ಪೆಲಕ್ಕಾಯಿ ತುಂಬಾ ಉಂಟು. ಪೆಲಕ್ಕಾಯಿ ಬಿತ್ತಿಲಿನ ಮರಗಳಲ್ಲಿ ಇರುವುದು. ನಮ್ಮ ಹಳೆಯ ಮರಗಳನ್ನೆಲ್ಲಾ ಕಳೆದ ಮರಿಯಾಲ ಮುಗಿದ ನಂತರ ಕಡಿದದ್ದು. ಮಿತ್ತ ಪುಣಿಯಲ್ಲಿ ಹೊಸ ಮನೆ ಕಟ್ಟಿದ್ದಕ್ಕೆ ಪೆಲತ ಮರತ ಬಾಕಿಲು ಕಿಟಿಕಿ ಮಾಡಿದ್ದು. ಬಿತ್ತಿಲಿನಲ್ಲಿ ಹೊಸ ಮರಗಳು ಬಂದದ್ದು ನಮಗೆ ಗೊತ್ತಾದದ್ದು ಹಳೆ ಮರಗಳನ್ನು ಕಡಿದಾಗಲೇ. ನಾವೆಣಿಸಿದ್ದು ಈ ವರ್ಷ ಪೆಲಕ್ಕಾಯಿ ಸಿಗಲಿಕ್ಕಿಲ್ಲ ಎಂದು. ಆದರೆ ಬಿತ್ತಿಲಿನ ಎಲ್ಲಾ ಹೊಸ ಮರಗಳಲ್ಲಿ ಈ ವರ್ಷ ಎಂಚಿನ ಪಸಲ್ ಮಾರಯ್ರೆ. ಒಂದು ಮರದಲ್ಲಿ ಮಾತ್ರ ನೋಡಬೇಕು. ಸಪೂರದ ಗೆಲ್ಲಿನಲ್ಲಿ ಕೂಡ ಗುಜ್ಜೆ ಆಗಿದೆ. ಗುಜ್ಜೆ ದೊಡ್ಡದು ಆದರೆ ನಮ್ಮ ಮರದ ಎಗೆ ತುಂಡಾಗಿ ಕೆಳಗೆ ಬೀಳ ಬಹುದು ಅಂತ ಅದನ್ನು ಕಜಿಪು ಮಾಡಲಿಕ್ಕೆ ಹೇಳಿದ್ದು. ಈಗ ಈ ಮಳೆಗೆ ಪರ್ಂದ್ ಪೆಲಕ್ಕಾಯಿ ಯಾರಿಗೆ ಬೇಕು ಹೇಳಿ. ಸುಮ್ಮನೆ ಅದು ಬಿದ್ದು ಹಾಳಾಗುತ್ತದೆ. ಬಿತ್ತಿಲಿಗೆ ಹೊಗಲಿಕ್ಕೆ ಆಗುವುದಿಲ್ಲ. ಉಮಿಲ್ ಅಂದ್ರೆ ಮಾರಾಯ್ರೆ ಬೈರಾಸು ಸುತ್ತಿಕೊಂಡು ಎಲ್ಲಿಯಾದರೂ ಹೋದೆವಾ ನಮ್ಮ ಕಾಲು ಕೂಡ ಪೆಲಕ್ಕಾಯಿಯ ರೆಚ್ಚೆಯ ಹಾಗೆ ಆಗುತ್ತದೆ. ಉಮಿಲ್ ತುಚ್ಚಿ. ಪೆಲಕ್ಕಾಯಿ ಮರದಲ್ಲೇ ಪರಿಂದಿದರೆ ಈ ಮಳೆಗೆ ಅದು ಅಷ್ಟು ರುಚಿ ಇರುವುದಿಲ್ಲ ಎಂದು ಒಳ್ಳೆ ಬುಲೆತ್ ನೋಡಿ ಮೊದಲೇ ಕಡ್ಪಿ ಅದನ್ನು ಸ್ವಲ್ಪ ಬೆಚ್ಚ ಜಾಗದಲ್ಲಿ ಇಟ್ಟರೆ ಅದು ಸೀಪೆ ಸೀಪೆ ಆಗುತ್ತದೆ. ಪೆಲಕ್ಕಾಯಿ ಮೂರಲಿಕ್ಕೆ ಮಾತ್ರ ಈಗ ಯಾರು ದುಂಬು ಬರುವುದಿಲ್ಲ. ಕೈಯಲ್...